Home » Blog » ಮೈಸೂರು; ಖದೀಮರ ಪತ್ತೆಗೆ ಬಂದ ಬೆಲ್ಜಿಯಂ ಮಾಲಿನೋಯ್ಸ್

ಮೈಸೂರು; ಖದೀಮರ ಪತ್ತೆಗೆ ಬಂದ ಬೆಲ್ಜಿಯಂ ಮಾಲಿನೋಯ್ಸ್

ಮೈಸೂರು, ಮಾರ್ಚ್ 08; ತನ್ನ ಜಾಣ್ಮೆ, ಚಾಣಾಕ್ಷತನದಿಂದ ಖದೀಮರ ಪಾಲಿಗೆ ಸಿಂಹಸ್ವಪ್ನವಾಗುವ, ಅಪರಾಧಿಗಳ ಸುಳಿವು ಪತ್ತೆ ಹಚ್ಚುವ ಸೂಪರ್ ಹೀರೋ ಇದೀಗ ಮೈಸೂರು ಪೊಲೀಸ್ ಶ್ವನದಳ ತಂಡಕ್ಕೆ ಸೇರ್ಪಡೆಯಾಗಿದ್ದಾನೆ.

ಮೈಸೂರು ಪೊಲೀಸ್ ಶ್ವಾನದಳಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಬೆಲ್ಜಿಯಂ ಮಾಲಿನೋಯ್ಸ್ (Belgian malinois) ತಳಿಯ ನಾಯಿ ಹೊಸ ಸದಸ್ಯ. ಬಹಳ ಚಾಣಾಕ್ಷವಾದ ಈ ನಾಯಿ ಉಡುಗೊರೆ ರೂಪದಲ್ಲಿ ಪೊಲೀಸ್ ಇಲಾಖೆಗೆ ಸೇರಿದೆ.