Mysuru Police Dept Have A New Member In The Form Of Belgian Malinois Dog | ಮೈಸೂರು ಪೊಲೀಸ್ ಇಲಾಖೆಗೆ ಬೆಲ್ಜಿಯಂ ಮೆಲಿನೋಯ್ಸ್ ಡಾಗ್ ಗಿಫ್ಟ್ ಮೈಸೂರಿನಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿ ಪೊಲೀಸರೂ ಕೂಡಾ ಅಪರಾಧ ಪ್ರಕರಣಗಳನ್ನು ತಡಮಾಡದೇ ಭೇದಿಸುತ್ತಿದ್ದಾರೆ. ಇನ್ನು ಪೊಲೀಸರ ಈ ತನಿಖೆಗೆ ಸಹಕಾರಿಯಾಗಿರೋದು ಶ್ವಾನದಳ. ಇದೀಗ ಈ ಶ್ವಾನದಳಕ್ಕೆ ಬ್ರಹ್ಮಾಸ್ತ್ರವೊಂದು ಸಿಕ್ಕಿದ್ದು ಮೈಸೂರು ಪೊಲೀಸಲ್ಲಿ ಭಾರೀ ಹುಮ್ಮಸ್ಸು ತರಿಸಿದೆ. ಮೈಸೂರಿನ ಪೊಲೀಸ್ ಇಲಾಖೆಗೆ ಆತನೇ ಈಗ ಬಲ… ತನ್ನ ಚಾಣಾಕ್ಷತನದಿಂದ ಮುನ್ನುಗ್ಗುವ ಈತ ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ತನ್ನ ಖದರ್ ತೋರಿಸುತ್ತಾನೆ… ಅಪರಾಧ, ವಿಧ್ವಂಸಕ ಕೃತ್ಯಗಳನ್ನ ಬಯಲು ಮಾಡೋ ಈತ ಮೈಸೂರಿನ ಶ್ವಾನ ದಳಕ್ಕೆ ಸೇರ್ಪಡೆಯಾದ ಹೊಸ ಯೋಧ. Vis flow.. ಎಸ್, ಇದು ಬೆಲ್ಜಿಯಂ ಮೆಲಿನೋಯ್ಸ್ (Belgian malinois) ತಳಿಯ ಶ್ವಾನ. ಬಹಳ ಚಾಣಾಕ್ಷವಾದ ಈ ನಾಯಿ ಉಡುಗೊರೆ ರೂಪದಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದೆ. ಅತ್ಯಂತ ವಿಶಿಷ್ಠವಾದ ಗುಣವುಳ್ಳ ಈ ಶ್ವಾನಕ್ಕೆ ಯೋಧ ಅಂತಾ ಹೆಸರಿಡಲಾಗಿದೆ. ಮೈಸೂರು ಪೊಲೀಸ್ ಶ್ವಾನ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಈ ತಳಿಯ ನಾಯಿ ಸೇರಿದೆ. ಈ ನಾಯಿಯ ಮಾರುಕಟ್ಟೆ ಮೌಲ್ಯ ಸುಮಾರು 1.50 ಲಕ್ಷವಾಗಿದೆ. ಮೈಸೂರಿನ ನಿವಾಸಿಯಾಗಿರುವ ಪ್ರಮೋದ್ ಪೊಲೀಸ್ ಇಲಾಖೆಯ ತನಿಖೆಗೆ ಸಹಾಯವಾಗಲಿ ಅನ್ನೋ ಉದ್ದೇಶದಿಂದ ಈ ಶ್ವಾನವನ್ನ ಗಿಫ್ಟ್ ನೀಡಿದ್ದಾರೆ.